TRIPS waiver: ಅವಲೋಕನ ಮತ್ತು ಹಿನ್ನೆಲೆ

ಸಂಪತ್ತಿನ ಮೊದಲು ಆರೋಗ್ಯ

ಇದನ್ನು ಓದಿ: English | हिंदी | தமிழ் | ಕನ್ನಡ | ലയാളം

ಅವಲೋಕನ

ವೈರಸ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಸರ್ಕಾರಿ ನೆರವು ವೈಜ್ಞಾನಿಕ ಅಭಿವೃದ್ಧಿಗೆ ದಾರಿ ತೋರಿಸಿದೆ - ಆದರೆ ಈಗ ಕಾರ್ಪೊರೇಟ್ ಸ್ವತ್ತಿನ ಹಕ್ಕುಗಳಿಂದಾಗಿ ಮುಖ್ಯವಾದ ಔಷಧಿಗಳು ಮತ್ತು ಸಾಧನಗಳನ್ನು ಎಲ್ಲ ಜನರು ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ ಮತ್ತು ಇದು ಲಕ್ಷಾಂತರ ಜನರ ಜೀವಗಳನ್ನು ಅಪಾಯಕ್ಕೆ ದೂಡುತ್ತಿದೆ.

ಅದಕ್ಕಾಗಿಯೇ ಲಸಿಕೆಗಳು, ಪ್ರಮುಖ ಔಷಧಿಗಳು ಮತ್ತು ವೈದ್ಯಕೀಯ ಸರಬರಾಜುಗಳಿಗಾಗಿ ಬೌದ್ಧಿಕ ಆಸ್ತಿಯ ಹಕ್ಕಿನ ನಿಯಮಗಳನ್ನು ಕೈಬಿಡುವಂತೆ ಅನೇಕ ಸರ್ಕಾರಗಳು, ಒಕ್ಕೂಟಗಳು ಮತ್ತು ನಾಗರಿಕ ಸಂಸ್ಥೆಗಳು, ವಿಶ್ವ ವಾಣಿಜ್ಯ ಸಂಸ್ಥೆಯನ್ನು ಕೋರುತ್ತಿವೆ: ಏಕೆಂದರೆ ಖಾಸಗಿ ಲಾಭವು ಎಲ್ಲ ಜನರ ಆರೋಗ್ಯಕ್ಕಿಂತ ಹೆಚ್ಚು ಮುಖ್ಯವಾಗಿರುವುದಿಲ್ಲ.

ಹಿನ್ನೆಲೆ

ಈ ಸಾಂಕ್ರಾಮಿಕ ರೋಗವು ವಿಶ್ವದಾದ್ಯಂತದ ಆರೋಗ್ಯ ಕಾರ್ಯಕರ್ತರಿಂದ ಹಿಂದೆಂದೂ ಇಲ್ಲದ ರೀತಿಯಲ್ಲಿ ತ್ಯಾಗವನ್ನು ಕೋರಿದೆ.

ಕೋವಿಡ್ ನಿಂದ ಹೊರಬರಲು ಎಲ್ಲಾ ದೇಶಗಳು ಮತ್ತು ಎಲ್ಲಾ ಜನರಿಗೆ ಔಷಧಿಗಳು, ಲಸಿಕೆ, ರೋಗನಿರ್ಣಯ ಮತ್ತು ಇತರ ವೈದ್ಯಕೀಯ ಉತ್ಪನ್ನಗಳು ಕೈಗೆಟುಕುವ ಬೆಲೆಯಲ್ಲಿ ಸಿಗುವುದು ಅಗತ್ಯವಿರುತ್ತದೆ. ಆದಾಗ್ಯೂ ವಿಶ್ವ ವಾಣಿಜ್ಯ ಸಂಸ್ಥೆಯ ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ-ಸಂಬಂಧಿತ ಅಂಶಗಳ (ಟಿಆರ್‌‌ಪಿಎಸ್) ಒಪ್ಪಂದವು ಔಷಧೀಯ ಕಂಪನಿಗಳಿಗೆ ಏಕಸ್ವಾಮ್ಯದ ಹಕ್ಕನ್ನು ನೀಡಿದ್ದು, ಇದು ಕಂಪನಿಗಳಿಗೆ ಇವುಗಳ ಜಾಗತಿಕ ಪೂರೈಕೆಯನ್ನು ಕೃತಕವಾಗಿ ಮಿತಿಗೊಳಿಸಲು ಮತ್ತು ಅತಿಯಾದ ಲಾಭವನ್ನು ಗಳಿಸಲು ಮತ್ತು ವಿಶ್ವದ ಹೆಚ್ಚಿನ ಭಾಗಗಳಲ್ಲಿ ನಿರ್ಬಂಧಿಸುವ ಬೆಲೆಗಳನ್ನು ವಿಧಿಸಲು ಅವಕಾಶ ಮಾಡಿಕೊಡುತ್ತದೆ.

ನಾವು ಈ ಬಿಕ್ಕಟ್ಟಿನಿಂದ ಹೊರಬರುವಂತೆ ಮಾಡಲು ಆರೋಗ್ಯ ಸಿಬ್ಬಂದಿಯು ದಣಿವರಿಯಿಲ್ಲದೆ ಕೆಲಸ ಮಾಡಿದ್ದಾರೆ. ಅವರು ಅಪಾಯಕಾರಿ ಪರಿಸ್ಥಿತಿಗಳನ್ನು ಸಹಿಸಿಕೊಂಡಿದ್ದಾರೆ, ಹೆಚ್ಚಿನ ವೇಳೆ ವೈಯಕ್ತಿಕವಾಗಿ ಕಡಿಮೆ ಸಮಯ ನೀಡಿದ್ದಾರೆ ಅಥವಾ ಸಮಯವನ್ನೇ ನೀಡಿಲ್ಲ, ಅಲ್ಲದೇ ಕೆಲವೊಮ್ಮೆ ಸೂಕ್ತವಾದ ವೈಯಕ್ತಿಕ ರಕ್ಷಣಾ ಸಾಧನಗಳೂ ಕೂಡ ಇಲ್ಲದೆ (ಪಿಪಿಇ) ರೋಗವನ್ನು ಎದುರಿಸುತ್ತಿದ್ದಾರೆ. ಇಂತಹ ಸುರಕ್ಷತಾ ಸಾಧನಗಳ ಕೊರತೆಯಿಂದಾಗಿ ಸಾವಿರಾರು ಕೆಲಸಗಾರರು ತಮ್ಮ ಜೀವದ ಬೆಲೆಯನ್ನೇ ನೀಡಬೇಕಾದ ಸಮಯ ಒದಗಿದೆ.

ಲಸಿಕೆ ತಲುಪಿಸಲು ಮತ್ತು ನಿರ್ವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮುಂಚೂಣಿ ಸಿಬ್ಬಂದಿಗಳನ್ನು ಹೊಂದಬೇಕಾದ ಅಗತ್ಯವಿದೆ.

ಏಕಸ್ವಾಮ್ಯದ ಹಕ್ಕನ್ನು ಚಲಾಯಿಸುವ ಮೂಲಕ ಸಾಂಕ್ರಾಮಿಕ ರೋಗದಿಂದ ಅತಿಯಾದ ಲಾಭ ಪಡೆಯಲು ಔಷಧಿ ಕಂಪನಿಗಳಿಗೆ ಅವಕಾಶ ನೀಡಬಾರದು, ಏಕೆಂದರೆ ಜಗತ್ತಿನ ಎಲ್ಲರೂ ಕೂಡ ಬಿಕ್ಕಟ್ಟನ್ನು ನಿವಾರಿಸಲು ಅನೇಕ ಪ್ರಯತ್ನಗಳು ಮತ್ತು ತ್ಯಾಗವನ್ನು ಮಾಡಿದ್ದಾರೆ.

ಅಕ್ಟೋಬರ್ ಆರಂಭದಲ್ಲಿ, ಭಾರತ ಮತ್ತು ದಕ್ಷಿಣ ಆಫ್ರಿಕಾಗಳು ವಿಶ್ವ ವ್ಯಾಪಾರ ಸಂಸ್ಥೆಗೆ “ಕೋವಿಡ್-19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ಚಿಕಿತ್ಸೆಗಾಗಿ ಟಿಆರ್‌‌ಐಪಿಎಸ್ ಒಪ್ಪಂದದ ಕೆಲವು ನಿಯಮಗಳನ್ನು ಕೈಬಿಡುವುದಕ್ಕಾಗಿ ಔಪಚಾರಿಕ ಪ್ರಸ್ತಾಪವನ್ನು ಮಾಡಿರುತ್ತವೆ”.

ಅಂದಿನಿಂದ ಇದನ್ನು 55 ಕ್ಕೂ ಹೆಚ್ಚು ದೇಶಗಳು ಅನುಮೋದಿಸಿವೆ ಮತ್ತು ಅಲ್ಲದೇ ಪ್ರಸ್ತಾಪವು ಇನ್ನೂ ಅನೇಕ ದೇಶಗಳಿಂದ ಬೆಂಬಲವನ್ನು ಪಡೆದಿದೆ. ಈ ನಿಯಮಗಳನ್ನು ಕೈಬಿಡದೇ ಇದ್ದಲ್ಲಿ ಔಷಧಿ ಕಂಪನಿಗಳು ಇತರ ತಯಾರಕರು ಕೋವಿಡ್-19 ಲಸಿಕೆಗಳು ಮತ್ತು ಔಷಧಿಗಳನ್ನು ಉತ್ಪಾದಿಸುವುದನ್ನು ತಡೆಯುವುದಕ್ಕೆ ಕಾರಣವಾಗುತ್ತದೆ, ಇದು ಉತ್ಪಾದನೆಯಲ್ಲಿ ಹೆಚ್ಚಳ ಉಂಟಾಗದಂತೆ ಮಾಡುತ್ತದೆ.

ಈ ಡಬ್ಲ್ಯುಟಿಒ ನಿಯಮಗಳು ದೊಡ್ಡ ಸಂಸ್ಥೆಗಳು ಔಷಧ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಹೊಂದುವುದಕ್ಕೆ ಅವಕಾಶವನ್ನು ಒದಗಿಸುತ್ತದೆ ಮತ್ತು ಸರ್ಕಾರಗಳ ಬದಲು ಔಷಧಿ ಸಂಸ್ಥೆಗಳೇ ಬೆಲೆಗಳನ್ನು ನಿರ್ಧರಿಸುವುದಕ್ಕೆ ಅವಕಾಶ ಮಾಡಿಕೊಡುವ ಮೂಲಕ ರೋಗದಿಂದ ಚೇತರಿಸಿಕೊಳ್ಳುವುದಕ್ಕೆ ಸರ್ಕಾರಿ ನಿಧಿಗಳನ್ನು ಬಳಸುವಂತೆ ಮಾಡುತ್ತದೆ.

ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ಉಂಟಾಗುವ "ಅಸಾಧಾರಣ ಸಂದರ್ಭಗಳಲ್ಲಿ" ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕೈಬಿಡಬಹುದು ಮಾಡಬಹುದು ಎಂದು ವಿಶ್ವ ವಾಣಿಜ್ಯ ಸಂಸ್ಥೆಯ ಒಪ್ಪಂದವು ಗುರುತಿಸುತ್ತದೆ. ಟಿಆರ್‌‌ಪಿಎಸ್ ಒಪ್ಪಂದದಲ್ಲಿ ಮಾಡಬಹುದಾದ ಬದಲಾವಣೆಗಳು ಜಾಗತಿಕ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಅಸಮರ್ಪಕವಾಗಿಲ್ಲ, ಆದ್ದರಿಂದ ಇವುಗಳನ್ನು ಕೈಬಿಡುವ ಅವಶ್ಯಕತೆಯಿದೆ ಎಂದು ಅನೇಕ ತಜ್ಞರು ಅಭಿಪ್ರಾಯ ಪಟ್ಟಿರುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ತಜ್ಞರು, ಯುಎನ್‌‌ಐಟಿಎಯಡಿ ಮತ್ತು ಯುಎನ್‌ಐಐಡಿಎಸ್ ಈ ನಿಯಮಗಳನ್ನು ಕೈಬಿಡುವ ವಿಷಯದಲ್ಲಿ ಬೆಂಬಲವನ್ನು ನೀಡಿವೆ. ಇಂಡಸ್ಟ್ರಿಯಲ್ ಗ್ಲೋಬಲ್ ಯೂನಿಯನ್, ಪಬ್ಲಿಕ್ ಸರ್ವೀಸಸ್ ಇಂಟರ್ನ್ಯಾಷನಲ್ (ಪಿಎಸ್ಐ) ಮತ್ತು ಇಂಟರ್ನ್ಯಾಷನಲ್ ಟ್ರೇಡ್ ಯೂನಿಯನ್ ಕಾನ್ಫೆಡರೇಷನ್ (ಐಟಿಯುಸಿ) ಸೇರಿದಂತೆ ಅಂತರರಾಷ್ಟ್ರೀಯ ವ್ಯಾಪಾರ ಒಕ್ಕೂಟವು ಕೂಡ ಈ ಪ್ರಸ್ತಾಪವನ್ನು ಅನುಮೋದಿಸಿವೆ. ತೀರಾ ಇತ್ತೀಚೆಗೆ, ಯುಎನ್ಐ ಗ್ಲೋಬಲ್ ಯೂನಿಯನ್ ಎಂಡ್ ಲೇಬರ್ 20 ಸಹ ಇದನ್ನು ಅನುಮೋದಿಸಿದೆ.

ಸರ್ಕಾರಗಳನ್ನು ಈ ನಿಯಮಗಳ ಕೈಬಿಡುವಿಕೆಗೆ ಒತ್ತಾಯಿಸುವ ಮೂಲಕ ಕಾರ್ಮಿಕ ಸಂಘಗಳು ಈ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಬಹುದಾಗಿದೆ.

Key info

ಔಷಧಿ ಸಂಸ್ಥೆಗಳಲ್ಲಿ ಸಿಗುವ ಭಾರೀ ಲಾಭಕ್ಕಿಂತ ಜನರ ಆರೋಗ್ಯವನ್ನು ಪರಿಗಣನೆಗೆ ತೆಗೆದುಕೊಳ್ಳಲು ವಿಶ್ವದಾದ್ಯಂತದ ಆರೋಗ್ಯ ಕಾರ್ಯಕರ್ತರು ಜಿ7 ಮತ್ತು ಇಯು ಸರ್ಕಾರಗಳಿಗೆ ಮನವಿ ಸಲ್ಲಿಸಿದ್ದಾರೆ. # ಕೋವಿಡ್-19 ಲಸಿಕೆಗಳು ಮತ್ತು ಚಿಕಿತ್ಸೆಯನ್ನು ಹಂಚಿಕೊಳ್ಳಿ!