ಇದನ್ನು ಓದಿ: English | हिंदी | தமிழ் | ಕನ್ನಡ | മലയാളം

ವೈರಸ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಸರ್ಕಾರಿ ನೆರವು ವೈಜ್ಞಾನಿಕ ಅಭಿವೃದ್ಧಿಗೆ ದಾರಿ ತೋರಿಸಿದೆ - ಆದರೆ ಈಗ ಕಾರ್ಪೊರೇಟ್ ಸ್ವತ್ತಿನ ಹಕ್ಕುಗಳಿಂದಾಗಿ ಮುಖ್ಯವಾದ ಔಷಧಿಗಳು ಮತ್ತು ಸಾಧನಗಳನ್ನು ಎಲ್ಲ ಜನರು ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ ಮತ್ತು ಇದು ಲಕ್ಷಾಂತರ ಜನರ ಜೀವಗಳನ್ನು ಅಪಾಯಕ್ಕೆ ದೂಡುತ್ತಿದೆ.

ಅದಕ್ಕಾಗಿಯೇ ಕೋವಿಡ್-19 ಲಸಿಕೆಗಳು, ಪ್ರಮುಖ ಔಷಧಿಗಳು ಮತ್ತು ವೈದ್ಯಕೀಯ ಸರಬರಾಜುಗಳಿಗಾಗಿ ಬೌದ್ಧಿಕ ಆಸ್ತಿಯ ಹಕ್ಕಿನ ನಿಯಮಗಳನ್ನು ಕೈಬಿಡುವಂತೆ ಅನೇಕ ಸರ್ಕಾರಗಳು, ಒಕ್ಕೂಟಗಳು ಮತ್ತು ನಾಗರಿಕ ಸಂಸ್ಥೆಗಳು, ವಿಶ್ವ ವಾಣಿಜ್ಯ ಸಂಸ್ಥೆಯನ್ನು ಕೋರುತ್ತಿವೆ(ಟಿಆರ್‌ಐಪಿಎಸ್‌). ಆದರೆ ಜಿ-7 ಮತ್ತು ಐರೋಪ್ಯ ಒಕ್ಕೂಟದ ದೇಶಗಳು ಈ ಪ್ರಸ್ತಾಪವನ್ನು ವಿರೋಧಿಸುತ್ತಿವೆ.

ಖಾಸಗಿಯವರ ಲಾಭವು ಜನರ ಆರೋಗ್ಯಕ್ಕಿಂತ ಹೆಚ್ಚಿನದಲ್ಲ ಎಂದು ಅವರಿಗೆ ತಿಳಿಸಲು ಈ ಪತ್ರಕ್ಕೆ ಸಹಿ ಮಾಡಿ.

ಟಿಆರ್‌ಐಪಿಎಸ್ ಕೈಬಿಡುವ ಬಗ್ಗೆ ಇನ್ನಷ್ಟು ಓದಿ: ಸಂಕ್ಷಿಪ್ತ ಮಾಹಿತಿ:

Video

Ahead of critical talks at the World Trade Organization (WTO) civil society and trade unions from the Global South are calling on rich countries’ leaders to stop blocking a proposal to waive certain intellectual property rights on COVID-19 vaccines and other medical products. Join the Twitter action! #NoCovidMonopolies

Monopoly patents or vaccines for all? [Kannada subtitles]

ಆತ್ಮೀಯ [ಜಿ7/ಇಯು ದೇಶಗಳ] ಮುಖಂಡರುಗಳೇ.

ಭಾರತ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕಾಗಿ ದುಡಿಯುತ್ತಿರುವ ಆರೋಗ್ಯ ಕಾರ್ಯಕರ್ತರಾಗಿ, ಪ್ರತಿದಿನ ಕೂಡ ನಾವು ಈ ವೈರಸ್ ಉಂಟುಮಾಡುತ್ತಿರುವ ಅನೇಕ ನೋವುಗಳಿಗೆ ಸಾಕ್ಷಿಯಾಗಿದ್ದೇವೆ; ಜನರು ತಮ್ಮ ಸಾವನ್ನಪ್ಪುತ್ತಿದ್ದಾರೆ ಮತ್ತು ಕುಟುಂಬಗಳು ರೋಗದ ಹೊಡೆತಕ್ಕೆ ತುತ್ತಾಗುತ್ತಿವೆ. ನಮ್ಮ ಜೊತೆಗಿನ ಆರೋಗ್ಯ ಕಾರ್ಯಕರ್ತರ ಸಾವುಗಳನ್ನೂ ಸಹ ನಾವು ನೋಡುತ್ತಿದ್ದೇವೆ.

[ಜಿ 7/ಇಯು ದೇಶಗಳಲ್ಲಿ] ಅನೇಕ ಆರೋಗ್ಯ ಕಾರ್ಯಕರ್ತರು ಮತ್ತು ಅವರ ಕುಟುಂಬಗಳು ಕೂಡ ಅಪಾರ ನೋವನ್ನು ಅನುಭವಿಸಿದ್ದಾರೆ ಎಂದು ನಮಗೆ ತಿಳಿದಿದೆ ಮತ್ತು ನಾವು ಅವರೊಂದಿಗೆ ಈ ನೋವನ್ನು ಹಂಚಿಕೊಂಡಿದ್ದೇವೆ.

ಆದಾಗ್ಯೂ, ನಾವು ಹಂಚಿಕೊಳ್ಳದೇ ಇರುವುದು [ಜಿ7/ಇಯು ದೇಶದಲ್ಲಿ] ಜನರಲ್ಲಿ ಹೊಸ ಆಶಾಕಿರಣ ಪ್ರಜ್ಞೆಯನ್ನು, ಏಕೆಂದರೆ ಈ ಧೇಶಗಳಲ್ಲಿ ಜೀವ ರಕ್ಷಕವೆನಿಸಿರುವ ಲಸಿಕೆಗಳನ್ನು ಹೊರತರಲಾಗುತ್ತಿದೆ.

[ಇಯು/ಜಿ7 ದೇಶಗಳು] ತಮ್ಮ ಇಡೀ ಜನಸಂಖ್ಯೆಗಿಂತ ಹೆಚ್ಚಿನ ಲಸಿಕೆಗಳನ್ನು ಹೊಂದಿದ್ದರೆ, ಬಡ ದೇಶಗಳಲ್ಲಿ 10 ಜನರಲ್ಲಿ 9 ಜನರು ಈ ವರ್ಷ ಈ ಲಸಿಕೆಯನ್ನು ಪಡೆಯುವ ಸಾಧ್ಯತೆ ಇರುವುದಿಲ್ಲ. ಆರೋಗ್ಯ ಕಾರ್ಯಕರ್ತರಾದ ನಾವು ಎಲ್ಲ ಜನರ ಜೀವವನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿದ್ದೇವೆ, ಆದರೆ ಲಸಿಕೆ ಪಡೆಯುವುದಕ್ಕೆ ನಮ್ಮ ಜನರು ಕೊನೆಯ ಸ್ಥಾನದಲ್ಲಿರುವುದು ನೋವು ನೀಡುವ ವಿಚಾರವಾಗಿದೆ.

ನಮ್ಮ ದೇಶಗಳಲ್ಲಿ ಬೆರಳೆಣಿಕೆಯಷ್ಟು ಕಂಪನಿಗಳು ಈಗಾಗಲೇ ಕೋವಿಡ್ 19 ಲಸಿಕೆಗಳನ್ನು ತಯಾರಿಸುತ್ತಿವೆ ಆದರೆ ನಮ್ಮ ಮತ್ತು ಇತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಇನ್ನೂ ಹೆಚ್ಚಿನ ತಯಾರಕರು ಕೌಶಲ್ಯ ಮತ್ತು ಸಾಮರ್ಥ್ಯವನ್ನು ಹಂಚಿಕೊಂಡಲ್ಲಿ ಹೆಚ್ಚಿನ ಉತ್ಪಾದನೆಯನ್ನು ಸಾಧಿಸಬಹುದು, ಇದರಿಂದಾಗಿ ಹೆಚ್ಚು ಜೀವಗಳನ್ನು ಕೂಡ ಉಳಿಸಬಹುದು. [ಜಿ7/ ಇಯು] ಸರ್ಕಾರಗಳು ಹೀಗೆ ಅರಿವು ಹಂಚಿಕೊಳ್ಳುವುದಕ್ಕೆ ಅವಕಾಶ ನೀಡುವ ಪ್ರಯತ್ನಗಳನ್ನು ಸಕ್ರಿಯವಾಗಿ ತಡೆಯುತ್ತಿರುವುದು ನಮಗೆ ನೋವುಂಟುಮಾಡುತ್ತಿದೆ.

ನಮ್ಮ ಸರ್ಕಾರಗಳು ಬೌದ್ಧಿಕ ಆಸ್ತಿ ನಿಯಮಗಳ ತಾತ್ಕಾಲಿಕ ಕೈಬಿಡುವಿಕೆಯನ್ನು ಪ್ರಸ್ತಾಪಿಸಿವೆ, ಇದು ವಿಶ್ವದಾದ್ಯಂತ ಅರ್ಹ ತಯಾರಕರಿಗೆ ಕೋವಿಡ್ ತಡೆಗಟ್ಟುವುದಕ್ಕಾಗಿ ಹೆಚ್ಚಿನ ಲಸಿಕೆಗಳನ್ನು ತಯಾರಿಸುವ ಮತ್ತು ಚಿಕಿತ್ಸೆ ಹಾಗೂ ರೋಗನಿರ್ಣಯದ ಅಗತ್ಯವಸ್ತುಗಳಂತಹವುಗಳನ್ನು ಒದಗಿಸಲು ಅನುವು ಮಾಡಿಕೊಡುತ್ತದೆ. ಆದರೂ [ಜಿ7/ಇಯು] ದೇಶಗಳು ಇದನ್ನು ಬೆಂಬಲಿಸುತ್ತಿಲ್ಲ. ಲಸಿಕೆ ಜ್ಞಾನವನ್ನು ಕೇವಲ ಬೆರಳೆಣಿಕೆಯಷ್ಟು ಔಷಧಿ ಕಂಪನಿಗಳು ಮಾತ್ರ ಉಳಿಸಿಕೊಳ್ಳಲು ಅವರು ಅವಕಾಶ ನೀಡುತ್ತಿದ್ದಾರೆ, ಈ ಮೂಲಕ ಅವರು ಯಾರು ಬದುಕಬೇಕು ಮತ್ತು ಯಾರು ಸಾಯಬೇಕು ಎನ್ನುವುದನ್ನು ಅವರು ನಿರ್ಧರಿಸಲು ಬಯಸುತ್ತಿದ್ದಾರೆ.

[ಈ ವಾರ ಜಿ-7 ಶೃಂಗಸಭೆಯಲ್ಲಿ ನಿಮ್ಮೊಂದಿಗೆ ಸೇರಲು ನಮ್ಮ ಸರ್ಕಾರದ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ, ಹಾಗಿದ್ದರೂ ಕೂಡ ಈ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನಮ್ಮ ಧ್ವನಿಯನ್ನು ನೀವು ಕೇಳಬೇಕೆಂದು ನಾವು ಬಯಸುತ್ತೇವೆ.]

ಸಾವಿರಾರು ಜನರ ಸಾವುನೋವುಗಳು ಉಂಟಾಗುವ ಸ್ಥಿತಿಯಲ್ಲಿರುವಾಗಲೂ ಕೂಡ [ಜಿ-7/ಇಯು] ಸರ್ಕಾರಗಳು, ನಮ್ಮ ಜನರನ್ನು ಕಾಪಾಡಲು ಸಂಪೂರ್ಣ ಮಾನವೀಯ ನೆರವಿನ ಅತ್ಯಂತ ಅಗತ್ಯವಿರುವ ಈ ಸಮಯದಲ್ಲಿಯೂ ಕೂಡ, ಔಷಧಿ ಕಂಪನಿಗಳ ವ್ಯಾಪಾರಿ ಏಕಸ್ವಾಮ್ಯವನ್ನೇ ಬೆಂಬಲಿಸುತ್ತಿರುವುದು ದುರದೃಷ್ಟಕರ. ನಮ್ಮ ಸರ್ಕಾರಗಳು ವಿನಂತಿಸಿರುವಂತೆಯೇ ಎಲ್ಲ ಸರ್ಕಾರಗಳೂ ಬೌದ್ಧಿಕ ಆಸ್ತಿ ನಿಯಮಗಳ ಕೈಬಿಡುವಿಕೆಯನ್ನು ತುರ್ತಾಗಿ ಬೆಂಬಲಿಸುವಂತೆ ನಾವು ನಿಮ್ಮನ್ನು ಕೋರುತ್ತೇವೆ. ಈ ಸರ್ಕಾರಗಳು ಮಾಡುತ್ತಿರುವ ವಿಳಂಬವು ಪ್ರತಿಯೊಂದು ದಿನವೂ ನಮ್ಮ ನೋವನ್ನು ಇನ್ನಷ್ಟು ಹೆಚ್ಚಿಸುತ್ತಿವೆ.

* ಈ ಪತ್ರವನ್ನು ಡಬ್ಲ್ಯುಟಿಒನಲ್ಲಿ ಟಿಆರ್‌‌ಪಿಎಸ್ ನಿಯಮ ಕೈಬಿಡುವ ಪ್ರಸ್ತಾಪವನ್ನು ಬೆಂಬಲಿಸುವಲ್ಲಿ ವಿಫಲವಾದ ಇತರ ಸರ್ಕಾರಗಳನ್ನು ಗುರಿಯಾಗಿಸಲು ಹೊಂದಿಕೊಳ್ಳಬಹುದು ಎಂಬುದನ್ನು ಗಮನಿಸಿ.